ಕರ್ನಾಟಕ

2004ರಲ್ಲಿ ಜೆಡಿಎಸ್ ಗೆ ಸರ್ವೆಗಳು ಕೊಟ್ಟಿದ್ದು 2 ಸೀಟ್ ಮಾತ್ರ, ಆದರೆ ಜೆಡಿಎಸ್ ಗೆದ್ದಿದ್ದು ಬರೋಬ್ಬರಿ 59 ಸೀಟ್ ಗಳು!

2004ರಲ್ಲಿ ಜೆಡಿಎಸ್ ಗೆ ಸರ್ವೆಗಳು ಕೊಟ್ಟಿದ್ದು 2 ಸೀಟ್ ಮಾತ್ರ, ಆದರೆ ಜೆಡಿಎಸ್ ಗೆದ್ದಿದ್ದು ಬರೋಬ್ಬರಿ 59 ಸೀಟ್ ಗಳು!

ಕೆಲವು ಸರ್ವೇ ಕಂಪನಿಗಳು ಯಾವುದಾದರೂ ಒಂದು ರಾಜಕೀಯ ಪಕ್ಷದ ಎಂಜಲು ಕಾಸು ನೆಕ್ಕಿ ತಿಂದು ಆ ಪಕ್ಷದ ಪರವಾಗಿ ಸರ್ವೇ ಫಲಿತಾಂಶ ನೀಡುತ್ತವೆ ಎಂಬ ವಿಷಯ ಜಗಜ್ಜಾಹೀರಾಗಿದೆ. ಕಾಂಗ್ರೆಸ್-ಬಿಜೆಪಿ ರಾಷ್ಟ್ರೀಯ ಪಕ್ಷಗಳ ಕೋಟಿ ಕೋಟಿ ದುಡ್ಡಿನ ಈ ಆಟದಲ್ಲಿ ಪೈಪೋಟಿ ನೀಡಲು ಆಗದ ಬಡ ಪಕ್ಷ ಜೆಡಿಎಸ್ ಯಾವಾಗಲೂ ಕಡೆಗಣನೆಗೆ ಒಳಗಾಗುತ್ತಿದೆ. ಇದಕ್ಕೆ ಸಾಕ್ಷಿ 2004ರ ವಿಧಾನಸಭಾ ಚುನಾವಣೆ. ಈ ಚುನಾವಣೆಯಲ್ಲಿ ಸರ್ವೇ ಕಂಪನಿಗಳ ಪ್ರಕಾರ ಜೆಡಿಎಸ್ ಪಕ್ಷ ಕೇವಲ 2 ಸೀಟುಗಳನ್ನು ಪಡೆಯಬೇಕಿತ್ತು, ಆದರೆ ಚುನಾವಣೆ ಫಲಿತಾಂಶ ಬಂದಾಗ ಜೆಡಿಎಸ್ ಪಡೆದದ್ದು ಬರೋಬ್ಬರಿ 59 ಸೀಟುಗಳು!

ಹೌದು ಇದರಿಂದ ಕ್ಲಿಯರ್ ಕಟ್ ಆಗಿ ತಿಳಿಯುವುದೇನೆಂದರೆ ರಾಷ್ಟ್ರೀಯ ಪಕ್ಷಗಳ ಕೋಟಿ ಕೋಟಿ ಹಣಕ್ಕೆ ತಮ್ಮನ್ನು ತಾವು ಮಾರಿಕೊಳ್ಳುವ ಕೆಲವು ಸರ್ವೇ ಕಂಪನಿಗಳು ಜನರಿಂದ ಸತ್ಯವನ್ನು ದೂರವಿಡುತ್ತವೆ. ಸರ್ವೇ ಕಂಪನಿಗಳಿಗೆ ಬರುವ ಆದಾಯದ ಮೂಲ ಏನು? ಕಾಮನ್ ಸೆನ್ಸ್ ಉಪಯೋಗಿಸಿದರೆ ತಿಳಿಯುವುದು ಇಂತಹ ಕಂಪನಿಗಳಿಗೆ ಯಾವುದೇ ಪ್ರಮುಖ ಆದಾಯ ಮೂಲಗಳಿಲ್ಲ. ಹಾಗಾಗಿಯೇ ಅವು ರಾಷ್ಟ್ರೀಯ ಪಕ್ಷಗಳು ಬಿಸಾಕುವ ದುಡ್ಡಿಗೆ ನಾಲಿಗೆ ಚಾಚಿಕೊಂಡು ಬೂಟು ನೆಕ್ಕುವ ಕೆಲಸ ಮಾಡುತ್ತಿವೆ. 

2004ರ ಘಟನೆ 2018ರಲ್ಲಿ ಮರುಕಳಿಸುತ್ತದೆ ಎಂದು ಹೇಳಲಾಗುತ್ತಿದೆ. 2 ಸೀಟು ಎಂದು ಹೇಳಿದ್ದ ಸಮಯದಲ್ಲಿ 59 ಸೀಟು ಪಡೆದ ಜೆಡಿಎಸ್ ಪಕ್ಷ 40-50 ಸೀಟು ಪಡೆಯುತ್ತದೆ ಎಂದು ಹೇಳಲಾಗುತ್ತಿರುವ ಈ ಸಮಯದಲ್ಲಿ ಸಂಪೂರ್ಣ ಬಹುಮತ ಪಡೆಯಬಹುದೆಂಬ ಮಾತುಗಳು ರಾಜಕೀಯ ವಿಶ್ಲೇಷಕರಿಂದ ಕೇಳಿಬರುತ್ತಿವೆ.

ಕಾರ್ಯಕರ್ತರೇ ಜೆಡಿಎಸ್ ಪಕ್ಷದ ಮಾಲೀಕರು ಎನ್ನುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿಕೆ ಅವರನ್ನು ಕಾರ್ಯಕರ್ತರು ಹೇಗೆ ತಮ್ಮ ವಿನೂತನ ವಿಧಾನಗಳಿಂದ ಮುಖ್ಯಮಂತ್ರಿ ಮಾಡುತ್ತಾರೆ ಎಂಬುದನ್ನು ಕುತೂಹಲದಿಂದ ಇಡೀ ರಾಜ್ಯ ಎದುರು ನೋಡುತ್ತಿದೆ.

11 replies »

  1. ರಾಯಚೂರ ಜಿಲ್ಲೆಯಲ್ಲಿ ಪವನಸಾಬರಗೆ ಸಿಟ ಕೊಡಬಹುದು ಸರ್ ಯವಕರ ಕಣ್ಮಣಿ ಪ್ರತಿಯೊಬ್ಬ ಯುವಕರ ಮನದಲ್ಲಿನೆಲ್ಲಿಸಿದ್ದಾರೆ ದೀನ ದಲಿತರ ಕ್ಷೇಮಕೊರುವ ವ್ಯಕ್ತಿ ಎಲ್ಲಾರ ಮೆಚ್ಚದನಾಯಕನಾಗಿ ಬಡವ ಬಲ್ಲಿದವ ಎನ್ನದೆ ಕಷ್ಟಬಂದ ಪ್ರತಿಯೊಬ್ಬ ಸೊದರನಾಗಿ ಎದೆ ತಟ್ಟಿ ನಿಲ್ಲುವ ಎಕೈಕಾ ವ್ಯಕ್ತಿ ನಮ್ಮ ಎಮ.ಪವನಕುಮಾರಸಾಬ

  2. ಅಭ್ಯರ್ಥಿಗಳನ್ನು ಆದಷ್ಟು ಬೇಗ ಪ್ರಕಟಗೊಳಿಸಬೇಕು. ಕಳೆದ ಚುನಾವಣೆಯಲ್ಲಿ ೨ನೇ ಸ್ಥಾನ ಪಡೆದ ಕ್ಷೇತ್ರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಈ ಬಾರಿ ಗೆಲ್ಲುವ ಯತ್ನ ಮಾಡಬೇಕು. ಹಿರಿಯೂರು ವಿಧಾನಸಭೆಯಲ್ಲಿ ಅತ್ಯಂತ ಹೆಚ್ಚು ಜೆ.ಡಿ.ಎಸ್. ಕಾರ್ಯಕರ್ತರಿದ್ದಾರೆ. ಅಲ್ಲಿ ಯುವ ನಾಯಕ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಿದರೆ ಗೆಲ್ಲಬಹುದು.

Leave a Reply

Your email address will not be published.