ರಾಜಕೀಯ

ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕೈ ಜೋಡಿಸಲ್ಲ. ಪ್ರಾದೇಶಿಕ ಪಕ್ಷ ಮಾತ್ರ ರಾಜ್ಯದ ಹಿತ ಕಾಯಲು ಸಾಧ್ಯ-ರಜನಿಕಾಂತ್

Rajnikanth

ಎರಡು ದಶಕಗಳ ಊಹಾಪೋಹಕ್ಕೆ ತೆರೆ ಎಳೆದಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೊನೆಗೂ ಹೊಸದೊಂದು ರಾಜಕೀಯ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಇದೆ ವೇಳೆ ಬಿಜೆಪಿಯೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತೀರಾ? ಎಂಬ ಪ್ರಶ್ನೆ ಉತ್ತರಿಸಿರುವ ರಜನಿ, ನಾನು ಎಂದಿಗೂ ರಾಷ್ಟೀಯ ಪಕ್ಷಗಳೊಂದಿಗೆ ಕೈ ಜೋಡಿಸುವುದಿಲ್ಲ. ರಾಜ್ಯದ ಹಿತ ಕಾಯಲು ಪ್ರಾದೇಶಿಕ ಪಕ್ಷಕ್ಕೆ ಮಾತ್ರ ಸಾಧ್ಯ. ಹೀಗಾಗಿ ನನ್ನ ಪಕ್ಷವು ಪ್ರಾದೇಶಿಕ ಪಕ್ಷವಾಗಿಯೇ ಇರುತ್ತದೆ ಎಂದು ಹೇಳಿದ್ದಾರೆ ಎಂಬ ವರದಿಯಾಗಿದೆ.

ತಮಿಳು ನಾಡು ರಾಜ್ಯದ ಹಿತ ಕಾಯಲು ರಾಷ್ಟೀಯ ಪಕ್ಷಗಳಿಗೆ ಸಾಧ್ಯವಿಲ್ಲ. ಹಾಗಾಗಿ ಪ್ರಾದೇಶಿಕ ಪಕ್ಷವನ್ನೇ ಕಟ್ಟುತ್ತೇನೆ ಎಂದು ನುಡಿದಿರುವ ರಜಿನಿಕಾಂತ್ ಅವರಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.