ಕರ್ನಾಟಕ

ಸಿದ್ದರಾಮಯ್ಯರ ಅಹಂಕಾರಿ ದೋರಣೆಗೆ ಕಣ್ಣೀರಿಡುತ್ತಿರುವ ದಲಿತ ಸಮುದಾಯ?

IMG-20171220-WA0022.jpg

ಕರ್ನಾಟಕ ರಾಜ್ಯದಲ್ಲಿ ದಲಿತ ಸಮುದಾಯಕ್ಕೆ ಸೇರಿರುವರು 24% ಜನ ಇದ್ದಾರೆ. ಚುನಾವಣಾ ಸಮಯದಲ್ಲಿ ಮಾತ್ರ ಈ ಸಮುದಾಯವನ್ನು ನೆನೆಸಿಕೊಳ್ಳುವ ಕಾಂಗ್ರೆಸ್ ಪಕ್ಷ, ದಲಿತ ಸಮುದಾಯಕ್ಕೆ ರಾಜಕೀಯವಾಗಿ ಯಾವುದೇ ಉನ್ನತ ಹುದ್ದೆಗಳು ಸಿಗದೇ ಇರುವ ಹಾಗೆ ಇಷ್ಟು ವರ್ಷಗಳ ಕಾಲ ನೋಡಿಕೊಂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ, ದಲಿತ ಮುಖಂಡರನ್ನು ಕಾಂಗ್ರೆಸ್ ಪಕ್ಷದಲ್ಲಿ ನಿರ್ಲಕ್ಷಿಸಲಾಗುತ್ತಿದೆ.

ದಲಿತ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಬೇಕು ಎನ್ನುವ ದಲಿತ ಸಮುದಾಯದ ಕೂಗಿಗೆ ಕ್ಯಾರೇ ಎನ್ನದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ, ದಲಿತರನ್ನು ಸಂಪೂರ್ಣ ಕಡೆಗಣಿಸಿದೆ. ಚುನಾವಣೆ ಸಮಯದಲ್ಲಿ ಆಶ್ವಾಸನೆಗಳ ಸುರಿಮಳೆಗೈದು ದಲಿತರನ್ನು ಮತ ಪಡೆಯಲು ಮಾತ್ರ ಉಪಯೋಗಿಸುವ ಕಾಂಗ್ರೆಸ್ ಪಕ್ಷ, ಚುನಾವಣೆ ಗೆದ್ದ ನಂತರ ದಲಿತರಿಗೆ ಉನ್ನತ ಹುದ್ದೆಗಳು ದೊರಕದೇ ಇರುವ ಹಾಗೆ ನೋಡಿಕೊಳ್ಳುತ್ತಿದೆ ಎಂಬುದೇ ದಲಿತ ಸಮುದಾಯದ ಅಳಲು. ಇಂತಹ ದ್ರೋಹಭರಿತ ದೋರಣೆಯಿಂದ ಇಂದು ದಲಿತ ಸಮುದಾಯ ಕಣ್ಣೀರಿಡುವಂತಾಗಿದೆ.

ನ್ಯಾಯವಾಗಿ ನೋಡಿದರೆ, 2013ರಲ್ಲೇ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು!

2013ರಲ್ಲಿ ಕಾಂಗ್ರೆಸ್ ಬಹುಮತ ಪಡೆದಾಗ 90ಕ್ಕಿಂತ ಹೆಚ್ಚು ಶಾಸಕರು ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಕ್ಕೆ ನಿಂತಿದ್ದರು. ಹೀಗಿದ್ದರೂ ಕೂಡ ತದನಂತರ ನಡೆದ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಕಾಂಗ್ರೆಸ್ ಪಕ್ಷಕ್ಕೆ ಅಂತಹದ್ದೇನು ಕೊಡುಗೆ ನೀಡದ ಸಿದ್ದರಾಮಯ್ಯ ಅವರ ಹೆಸರು ಕೇಳಿಬಂದಿತು. ಇದರಿಂದ ಬೇಸರಗೊಂಡ ಖರ್ಗೆ ಅವರು ತಮಗಾದ ನೋವನ್ನು ಹಾಗೇ ನುಂಗಿಕೊಂಡು ಸಿದ್ದರಾಮಯ್ಯ ಅವರಿಗೆ ಯಾವ ವಿರೋಧವೂ ವ್ಯಕ್ತಪಡಿಸದೇ ಅಭಿನಂದಿಸಿ ಸಭೆಯಿಂದ ಹೊರನಡೆದು ಪಕ್ಷ ನಿಷ್ಠೆ ಮೆರೆದರು. ಆದರೆ, ಖರ್ಗೆ ಅವರ ನೋವು ಯಾರೂ ಕೇಳಲಿಲ್ಲ. ಅಲ್ಲಿಗೆ ಖರ್ಗೆ ಎಂಬ ದಲಿತ ನಾಯಕನನ್ನು ಕಾಂಗ್ರೆಸ್ ಪಕ್ಷ ಕುತಂತ್ರ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ದೂರವಿಟ್ಟಿತು.

ಕೊರಟಗೆರೆಯಲ್ಲಿ ಪರಮೇಶ್ವರ್ ಸೋಲಲೂ ಕೂಡ ಕಾಂಗ್ರೆಸ್ ಪಕ್ಷದವರೇ ಕಾರಣ?

2013ರ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಪರಮೇಶ್ವರ್ ಹೀನಾಯವಾಗಿ ಸೋಲು ಕಾಣಲು ನೇರ ಕಾರಣ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರೇ ಎಂಬುದು ಹಲವರ ಅಭಿಪ್ರಾಯ. ಪರಮೇಶ್ವರ್ ಅವರು ಗೆದ್ದು ಬಿಟ್ಟರೆ ಮುಖ್ಯಮಂತ್ರಿ ಸ್ಥಾನ ತನ್ನ ಕೈತಪ್ಪುತ್ತದೆ ಎಂಬ ವಿಷಯ ಅರಿತಿದ್ದ ಸಿದ್ದರಾಮಯ್ಯ, ಕೊರಟಗೆರೆ ಕ್ಷೇತ್ರದಲ್ಲಿಯೇ ಪರಮೇಶ್ವರ್ ಅವರು ಸೋಲುವಂತೆ ನೋಡಿಕೊಂಡರು ಎಂಬ ಮಾತಿದೆ.

S_D2

2018ರಲ್ಲೂ ದಲಿತರಿಗೆ ಮೋಸ ಮಾಡಲು ಕಾಂಗ್ರೆಸ್ ಪ್ಲಾನ್?

ಮುಂದಿನ ಮುಖ್ಯಮಂತ್ರಿ ಯಾರು ಆಗಬೇಕು ಎಂದು ಕಾಂಗ್ರೆಸ್ನಲ್ಲಿ ಈಗಾಗಲೇ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಈಗಾಗಲೇ ಹೋದ ಕಡೆಯೆಲ್ಲ ನಾನೇ ಮುಖ್ಯ ಮಂತ್ರಿ ಅಂತ ಹೇಳುತ್ತಾ ಇದ್ದಾರೆ. ಜೊತೆಗೆ ನವ ಕರ್ನಾಟಕ ನಿರ್ಮಾಣ ಯಾತ್ರೆಯನ್ನು ಕೂಡ ತನ್ನ ನೇತೃತ್ವದಲ್ಲಿಯೇ ಪ್ರಾರಂಭಿಸಿದ್ದಾರೆ. ಎಲ್ಲಿ ಪರಮೇಶ್ವರ್ ಅವರು ಮುಖ್ಯಮಂತ್ರಿ ಸ್ಥಾನ ಹೈಜಾಕ್ ಮಾಡುತ್ತಾರೋ ಎನ್ನುವ ಭಯದಲ್ಲಿ ಸಿದ್ದರಾಮಯ್ಯ ಅವರು ಯಾವ ಕಾರ್ಯಕ್ರಮಗಳಲ್ಲಿಯೂ ದಲಿತರು ಕೇಂದ್ರಬಿಂದುವಾಗಿ ಕಾಣಲು ಬಿಡುತ್ತಿಲ್ಲ ಎಂಬ ಅಭಿಪ್ರಾಯವಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಸಡ್ಡು ಹೊಡೆದು ಪಕ್ಷದ ಹೆಸರಿನಲ್ಲಿ ತಾನು ಕೂಡ ಪ್ರತ್ಯೇಕವಾಗಿ ಯಾತ್ರೆ ಪ್ರಾರಂಭಿಸುವ ಚಿಂತನೆಯಲ್ಲಿ ಪರಮೇಶ್ವರ್ ತೊಡಗಿದ್ದಾರೆ ಎಂಬ ಮಾಹಿತಿ ಇದೆ. ಇದನ್ನು ತಿಳಿದ ಸಿದ್ದರಾಮಯ್ಯ, ಪರಮೇಶ್ವರ್ ಅವರನ್ನು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಕೊರಟಗೆರೆ ಕ್ಷೇತ್ರದಲ್ಲಿಯೇ ಸೋಲಿಸುವ ಮಸಲತ್ತು ಮಾಡಿ ತನ್ನ ಮಹತ್ವಕಾಂಕ್ಷೆಗೆ ತೊಡಕಾಗಿರುವ ಪರಮೇಶ್ವರ್ ಅವರನ್ನು ರಾಜಕೀಯವಾಗಿ ಮುಗಿಸುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಈ ಮೂವರಲ್ಲಿ ದಲಿತರು ಈಗ ಯಾರ ಕಡೆ ಮುಖ ಮಾಡುತ್ತಾರೆ?

ಕಾಂಗ್ರೆಸ್ ಪಕ್ಷದಲ್ಲಿ ಇಷ್ಟು ದಶಕಗಳ ಕಾಲ ದಲಿತರ ಮತಗಳನ್ನು ಮಾತ್ರ ಪಡೆದು, ದಲಿತರನ್ನು ಅಧಿಕಾರದಿಂದ ದೂರ ಇಡುವ ಪದ್ಧತಿ ಇದೆ ಎಂದು ಹೇಳಲಾಗುತ್ತಿದೆ. 2018ರ ಚುನಾವಣೆಯಲ್ಲಿಯೂ ಕೂಡ ದಲಿತರನ್ನು ದೊಡ್ಡ ಹುದ್ದೆಗಳಿಂದ ದೂರ ಇಡುವ ಎಲ್ಲ ಲಕ್ಷಣಗಳೂ ಕಾಣುತ್ತಿದೆ. ಇತ್ತ ಬಿಜೆಪಿ ಪಕ್ಷದಲ್ಲಿ ದಲಿತರನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಎಂಬುದು ಜಗಜ್ಜಾಹಿರವಾಗಿದೆ. ಹಾಗಾಗಿಯೇ ದಲಿತರು ಬಿಜೆಪಿ ಪಕ್ಷವನ್ನು ದೂರ ಇಡುತ್ತಾರೆ. ಇತ್ತ ಜೆಡಿಎಸ್ ಪಕ್ಷದಲ್ಲಿ ದಲಿತ ಸಮುದಾಯಕ್ಕೆ ಖಂಡಿತವಾಗಿಯೂ ಉಪಮುಖ್ಯಮಂತ್ರಿ ಸ್ಥಾನ ಕೊಡುವುದಾಗಿ ಹೆಚ್.ಡಿ. ಕುಮಾರಸ್ವಾಮಿ ಪ್ರಮಾಣ ಮಾಡಿದ್ದಾರೆ.

ಇವೆಲ್ಲಾ ಬೆಳವಣಿಗೆಗಳನ್ನು ಕಂಡರೆ, ದಲಿತ ಸಮುದಾಯ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ಖಾತ್ರಿ ಆಗಿದೆ. ಚುನಾವಣೆಯಲ್ಲಿ ಇದರ ಪರಿಣಾಮ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.