ಕರ್ನಾಟಕ

ದೇಶಭಕ್ತಿ ಮೆರೆದ ಫಾರೂಕ್ ಅಬ್ದುಲ್ಲಾ: ಭಾರತದ ಪ್ರತಿಯೊಬ್ಬ ಮುಸಲ್ಮಾನನೂ ಭಾರತದ ಕೆಚ್ಚೆದೆಯ ದೇಶಪ್ರೇಮಿ

20171210_153703.jpg

ತುಮಕೂರು: ಇಲ್ಲಿ ನಡೆಯುತ್ತಿರುವ ಜಾತ್ಯತೀತ ಜನತಾದಳ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಸಂಸದ ಫಾರೂಕ್ ಅಬ್ದುಲ್ಲಾ ಅವರು ಭಾರತದಲ್ಲಿರುವ ಪ್ರತಿಯೊಬ್ಬ ಮುಸಲ್ಮಾನನೂ ಭಾರತದ ಮಣ್ಣಲ್ಲೇ ಹುಟ್ಟಿ, ಭಾರತದ ಮಣ್ಣಲ್ಲೇ ಬೆಳೆದು, ಭಾರತದ ಮಣ್ಣಲ್ಲೇ ಸಾಯುತ್ತಾನೆ. ನಮ್ಮ ದೇಶದ ಮುಸಲ್ಮಾನರು ಭಾರತವನ್ನು ಕೆಚ್ಚೆದೆಯಿಂದ ಪ್ರೀತಿಸುತ್ತಾರೆ ಎಂದು ಹೇಳಿದರು. ಮುಸಲ್ಮಾನರು ಅಪ್ರತಿಮ ದೇಶಪ್ರೇಮಿಗಳು. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಅವರು ಹೇಳಿದರು.

ಸಮಾಜವನ್ನು ಒಡೆಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಅದೆಷ್ಟೋ ಜನ ಯುವಕರು ಕೆಲಸ ಇಲ್ಲದೆ ನರಳುತ್ತಿದ್ದಾರೆ. ಎಷ್ಟೋ ಕುಟುಂಬಗಳು ಬಡತನದಲ್ಲೇ ಮಿಂದೇಳುತ್ತಿದ್ದಾರೆ. ಎಲ್ಲಾ ಧರ್ಮದ ಜನರೂ ನೋವು ಅನುಭವಿಸುತ್ತಿದ್ದಾರೆ. ಇಂತಹ ಸಮಸ್ಯೆಗಳು ಮೊದಲು ಸರಿಪಡಿಸಬೇಕಾಗಿದೆ ಹಾಗೂ ಇಂತಹ ಸಮಸ್ಯೆಗಳ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಾಗಿದೆ ಎಂದರು.