ಕರ್ನಾಟಕ

ಕಾಂಗ್ರೆಸ್-ಬಿಜೆಪಿಗೆ ವೋಟು ಹಾಕುವುದೇ ಉತ್ತರ ಕರ್ನಾಟಕದ ಅಭಿವೃದ್ಧಿ-ದುಃಸ್ಥಿತಿಗೆ ಮೂಲ ಕಾರಣ?

20171205_160024.jpg

ಉತ್ತರ ಕರ್ನಾಟಕದ ಜನರನ್ನು 70 ವರ್ಷಗಳಿಂದ ಮರಳು ಮಾಡುವುದರಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಸಫಲವಾಗಿವೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಒಟ್ಟು ಸುಮಾರು 90 ಕ್ಷೇತ್ರಗಳಿವೆ. ಇದರಲ್ಲಿ ಸುಮಾರು 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ ಉತ್ತರ ಕರ್ನಾಟಕದ ಊರುಗಳ ಅಭಿವೃದ್ಧಿ ಮಾತ್ರ ಶೂನ್ಯ.

ಭಾರತಕ್ಕೆ ಸ್ವತಂತ್ರ ಬಂದ ನಂತರದ 70 ವರ್ಷಗಳಿಂದಲೂ ಉತ್ತರ ಕರ್ನಾಟಕ ಭಾಗದಲ್ಲಿ ಬಹುತೇಕರು ರಾಷ್ಟ್ರೀಯ ಪಕ್ಷಗಳ ಶಾಸಕರೇ ಆರಿಸಿ ಬರುತ್ತಿದ್ದಾರೆ. ಹಾಗಾಗಿಯೇ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯೇ ಕಂಡಿಲ್ಲ. ಚುನಾವಣೆಯ ಸಂದರ್ಭದಲ್ಲಿ ಹಣ-ಹೆಂಡ-ಜಾತಿ ಉಪಯೋಗಿಸಿ ಜನರಿಗೆ ಮೋಸ ಮಾಡುವ ಕಲೆಯನ್ನು ಇಲ್ಲಿಯ ರಾಷ್ಟ್ರೀಯ ಪಕ್ಷದ ಶಾಸಕರು ಕರಗತ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಮಿಷಗಳಿಗೆ ಒಳಗಾಗಿ ಒಂದು ಬಾರಿ ಮತ ನೀಡಿದವರು ಮುಂದಿನ 5 ವರ್ಷಗಳ ಕಾಲ ನೀರು, ರಸ್ತೆ, ಉದ್ಯೋಗ ಯಾವ ಸೌಲಭ್ಯಗಳೂ ಇಲ್ಲದೇ ಬೀದಿಗೆ ಬಿದ್ದಾಗ ರಾಷ್ಟ್ರೀಯ ಪಕ್ಷದ ಯಾವ ಶಾಸಕರೂ ಬರುವುದಿಲ್ಲ.

ಇದನ್ನು ಅರಿತು ಜನರು ಮತದಾನ ಮಾಡಿದರೆ ಒಳಿತು. ಇಲ್ಲವಾದರೆ, ಮತ್ತೆ ಜನರನ್ನು ಮರಳು ಮಾಡಿ 5 ವರ್ಷಗಳ ಕಾಲ ಕಷ್ಟಕೂಪಕ್ಕೆ ತಳ್ಳುತ್ತಾರೆ.

Advertisements