ಕರ್ನಾಟಕ

ಕರ್ನಾಟಕದಲ್ಲಿ ಗಲಭೆ ಎಬ್ಬಿಸಲು ಬಿಜೆಪಿ ಅಮಿತ್ ಶಾ ಸೂಚನೆ – ಸತ್ಯ ಬಾಯಿ ಬಿಟ್ಟ ಪ್ರತಾಪ್ ಸಿಂಹ? ವಿಡಿಯೋ ವೈರಲ್

20171203_204113.jpg

ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಅವರು ಬೆಂಗಳೂರಿಗೆ ಬಂದಾಗ ಪೊಲೀಸರು ಲಾಠಿ ಚಾರ್ಜ್, ಟಿಯರ್ ಗ್ಯಾಸ್ ಹಾಕುವಷ್ಟು ಉಗ್ರ ಪ್ರತಿಭಟನೆ ಮಾಡಬೇಕು ಎಂದು ಸೂಚಿಸಿದ್ದಾರೆ ಎಂದು ಸ್ವತಃ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಮಿತ ಶಾ ಅವರು ಬೆಂಗಳೂರಿಗೆ ಬಂದಾಗ ಬಿಜೆಪಿ ಯುವ ಮೋರ್ಚಾದವರಿಗೆ ಕಳೆದ ಕೆಲವು ದಿನಗಳಲ್ಲಿ ನೀವು ಏನೇನು ಪ್ರತಿಭಟನೆ ಮಾಡಿದ್ದೀರಿ, ಎಷ್ಟು ಬಾರಿ ಲಾಠಿ ಚಾರ್ಜ್, ಟಿಯರ್ ಗ್ಯಾಸ್ ಹಾಕಿದ್ದಾರೆ? ಇಂತಹ ಘಟನೆಗಳು ನಡೆಯಲು ಇನ್ನೂ ಉಗ್ರವಾಗಿ ಪ್ರತಿಭಟನೆ ಮಾಡಬೇಕು ಎಂದು ಹೇಳಿದ್ದಾರೆ ಎಂದು ವಿಡಿಯೋದಲ್ಲಿ ಪ್ರತಾಪ್ ಸಿಂಹ ನುಡಿದಿದ್ದಾರೆ. ಇದಕ್ಕೆ ಸಂಸದ ಪ್ರತಾಪ್ ಸಿಂಹ ಅವರು ಕೂಡ ಒಪ್ಪಿಗೆ ಸೂಚಿಸಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.

ವಿಡಿಯೋ ನೋಡಿ:

Advertisements