ಕರ್ನಾಟಕ

ಶಿಕಾರಿಪುರದಲ್ಲೇ ಯಡಿಯೂರಪ್ಪ ಅವರನ್ನು ಮಣಿಸಲು ಬಿಜೆಪಿಯ ಇನ್ನೊಂದು ಬಣದ ಸಂಚು? ಕಂಗಾಲಾದ ಯಡಿಯೂರಪ್ಪ

Fotor_15112618504045.jpg

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ದೂರವಿಡಲು ಬಿಜೆಪಿ ಪಕ್ಷದಲ್ಲೇ ಇರುವ ಎದುರಾಳಿ ಬಣ ಸಂಚು ರೂಪಿಸಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಯಡಿಯೂರಪ್ಪ ಅವರು ಶಾಸಕ ಆಗುವುದನ್ನೇ ತಡೆದರೆ ಸುಲಭವಾಗಿ ಮುಖ್ಯಮಂತ್ರಿ ಸ್ಥಾನವನ್ನು  ಎದುರಾಳಿ ಬಣದ ಯಾರಾದರೂ ವಹಿಸಿಕೊಳ್ಳಬಹುದು ಎಂಬುದು ಅವರ ಯೋಜನೆ ಎಂದು ಹೇಳಲಾಗುತ್ತಿದೆ.

2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಡೆದಂತಹ ಘಟನೆಯೊಂದು 2018ರಲ್ಲಿ ಬಿಜೆಪಿ ಪಕ್ಷದಲ್ಲಿ ನಡೆಯಬಹುದು ಎಂಬುದು ಹಲವರ ಅಭಿಪ್ರಾಯ. 2013ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಪರಮೇಶ್ವರ್ ಅವರ ಸೋಲಿಗೆ ಕಾಂಗ್ರೆಸ್ ಪಕ್ಷದ ಇನ್ನೊಂದು ಬಣವೇ ನೇರ ಕಾರಣ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ. ಪರಮೇಶ್ವರ್ ಅವರು ಶಾಸಕರಾದರೆ, ಮುಖ್ಯಮಂತ್ರಿ ಸ್ಥಾನವನ್ನು ತಮ್ಮ ಬಣದವರು ಪಡೆಯುವುದು ಕಷ್ಟ ಎಂಬುದನ್ನು ಅರಿತ ವಿರೋಧಿ ಬಣದವರು ಪರಮೇಶ್ವರ್ ಅವರನ್ನು ಶಾಸಕ ಆಗಲು ಕೂಡ ಬಿಡಲಿಲ್ಲ ಎಂಬುದು ಹಲವರ ಅಭಿಪ್ರಾಯ. ಇದೇ ರೀತಿ 2018ರಲ್ಲಿ ಬಿಜೆಪಿ ಪಕ್ಷದವರೇ ಯಡಿಯೂರಪ್ಪನವರನ್ನು ಸೋಲಿಸಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ.

ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ಈ ಬಾರಿ ಮತ ಪಡೆಯುವುದಕ್ಕೆ ಮಾತ್ರ ಉಪಯೋಗಿಸಿ ನಂತರ 75 ವರ್ಷ ಮೀರಿದವರನ್ನು ಬಿಜೆಪಿ ಪಕ್ಷದಲ್ಲಿ ಮುಖ್ಯಮಂತ್ರಿ ಮಾಡಲು ಆಗುವುದಿಲ್ಲ ಎಂಬ ನೆಪವೊಡ್ಡಿ ದೂರ ಇಡುವ ಸಂಭವ ಇದೆ ಎಂದು ಹೇಳಲಾಗುತ್ತಿದೆ.

Advertisements