ಕರ್ನಾಟಕ

ಮಾಧ್ಯಮದ ವಿರುದ್ಧ ರೇಗಿದ ಪ್ರತಾಪ್ ಸಿಂಹ – ‘ಬೇರೆ ಯಾವುದಾದರೂ ಕೆಲಸ ನೋಡಿಕೊಳ್ಳಲಿ’


ಮಾಧ್ಯಮದ ವಿರುದ್ಧ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ರೇಗಾಡಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ನಿಮಗೆ ಜರ್ನಲಿಸಂ ಗೊತ್ತಿಲ್ಲದಿದ್ದರೆ, ಬೇರೆ ಯಾವುದಾದರೂ ಕೆಲಸ ನೋಡಿಕೊಳ್ಳಿ ಎಂದು ಟ್ವೀಟ್ ಮಾಡಿ ಮಾಧ್ಯಮಗಳಿಗೆ ಸವಾಲೆಸೆದಿದ್ದಾರೆ.

ನೆನ್ನೆ ಸಂಜೆ ಬಿಜೆಪಿ ಬೆಂಬಲಿಗ ಫೇಸ್ ಬುಕ್ ಪೇಜ್ ಗಳು ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಅವರಿಗೆ ಅನೈತಿಕ ಸಂಬಂಧ ಇತ್ತು ಎಂದು ಬರೆದಿದ್ದರು. ಇದರಲ್ಲಿ ಪ್ರತಾಪ್ ಸಿಂಹ ಅವರ ಬೆಂಬಲಿಗ ಪೇಜ್ ಎಂದು ಹೇಳಲಾಗುವ ಪೇಜ್ ಕೂಡ ಒಂದು. ಈ ಸುದ್ದಿ ಪ್ರಸಾರ ಮಾಡಿದ ಮಾಧ್ಯಮದವರ ವಿರುದ್ಧ ಪ್ರತಾಪ್ ಸಿಂಹ ಬೇರೆ ಕೆಲಸ ನೋಡಿಕೊಳ್ಳಿ ಎಂದು ಕಿಡಿಕಾರಿದ್ದಾರೆ.

ಬಿಜೆಪಿಯ ಗಣಿ ಹಗರಣಗಳ ವಿರುದ್ಧ, ರೆಡ್ಡಿ ಬ್ರದರ್ಸ್ ವಿರುದ್ಧ ಬರೆದಿದ್ದ ಇದೇ ಪ್ರತಾಪ್ ಸಿಂಹ, ಇದೀಗ ಅಧಿಕಾರದ ಆಸೆಗೆ ಬಿಜೆಪಿ ಪಕ್ಷದಲ್ಲಿಯೇ ಹಗರಣ ನಡೆಸಿದವರ ಜೊತೆಯಲ್ಲಿಯೇ ಒಟ್ಟಾಗಿದ್ದಾರೆ. ಇಂಥವರಿಂದ ಮಾಧ್ಯಮಗಳು ಪಾಠ ಕಲಿಯಬೇಕೆ? ಮಾಧ್ಯಮದವರೇ ಇವರಿಗೆ ಪಾಠ ಕಲಿಸಬೇಕೆ?

Advertisements