ಕರ್ನಾಟಕ

ದಲಿತರನ್ನು ಬರೀ ಮತಕ್ಕಾಗಿ ಓಲೈಸುವ ಸಿದ್ದು-ಕಾಂಗ್ರೆಸ್ ಗೆ 8 ಪ್ರಶ್ನೆಗಳ ಪಟ್ಟಿ ಕೊಟ್ಟ ನೆಟ್ಟಿಗ

ಹೆಚ್.ಡಿ. ಕುಮಾರಸ್ವಾಮಿ ಅವರು ತಾನು ಮುಖ್ಯಮಂತ್ರಿ ಆದರೆ, ದಲಿತ ಉಪಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಿದ್ದಾರೆ. ಈ ವಿಷಯ ಸಹಿಸಲಾಗದೆ ಕಾಂಗ್ರೆಸ್ ಪಕ್ಷದವರು ಕುಮಾರಸ್ವಾಮಿ ಅವರ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಸಾರ್ವಜನಿಕರು ಸಿದ್ದು-ಕಾಂಗ್ರೆಸ್ ಗೆ ದಲಿತರ ವಿಷಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಮೋಸ ಬಯಲಿಗೆಳೆದು 8 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಕೆಳಗಿವೆ ಓದಿ-

​ದಲಿತರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆಂದು ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿಕೆ ಕೊಟ್ಟಿದ್ದಾರೆ.

ಜೆಡಿಎಸ್ ಅಧಿಕಾರಕ್ಕೆ ಬರಲ್ಲ, ಅದಕ್ಕೆ ಆ ರೀತಿ ಹೇಳಿಕೆ ಕೊಡುತ್ತಾರೆ ಎಂದಿರುವ ಸಿದ್ದರಾಮಯ್ಯನವರಿಗೂ… ಹಾಗೂ ಉಪಮುಖ್ಯಮಂತ್ರಿ ಯಾಕೆ? ಮುಖ್ಯಮಂತ್ರಿ ಹುದ್ದೆಯನ್ನು ಕೊಡಿ ಎಂದು ಕೇಳುವ ಕಾಂಗ್ರೇಸಿಗರಿಗೂ…

ಕಾಂಗ್ರೇಸ್ಸಿಗರೇ…

● 60 ವರ್ಷಗಳಿಂದ ಶೇಕಡಾ 90% ರಷ್ಟು ದಲಿತರ ಮತವನ್ನು ಪಡೆಯುತ್ತಿರುವ ಪಕ್ಷ ನಿಮ್ಮದು, ನೀವ್ಯಾಕೆ ದಲಿತರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಕೊಡುವ ಬಗ್ಗೆ ಚಿಂತಿಸಲಿಲ್ಲ…???

● ಜೀವಮಾನ ಪೂರ್ತಿ ಕಾಂಗ್ರೇಸ್ ಪಕ್ಷಕ್ಕೆ ದುಡಿದ ಮಲ್ಲಿಕಾರ್ಜನ್ ಖರ್ಗೆ ಯವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ತಪ್ಪಿಸಿ, ಇತ್ತೀಚೆಗೆ ಜನತಾದಳದಿಂದ ಕಾಂಗ್ರೇಸ್ಗೆ ಬಂದ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದದ್ದು ಯಾಕೆ…???

● ಮತ್ತೊಬ್ಬ ದಲಿತ ಮುಖಂಡ ಪರಮೇಶ್ವರರು, ಸಿಎಂ ಸ್ಥಾನಕ್ಕೆ ನನ್ನೊಂದಿಗೆ ಪೈಪೋಟಿಗೆ ಇಳಿಯುತ್ತಾರೆಂಬ ಕಾರಣಕ್ಕೆ, ಅವರನ್ನು ಕುತಂತ್ರದಿಂದ ಸೋಲಿಸಿದ ಸಿದ್ದರಾಮಯ್ಯನವರು ದಲಿತ ವಿರೋಧಿ ಎಂದು ನಿಮಗೆ ಅನ್ನಿಸಲಿಲ್ಲವೇ…???

●ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಾಧಿಭಾಗ್ಯ ಕೊಟ್ಟ ಸಿದ್ದರಾಮಯ್ಯನವರಿಗೆ ಬಡ ದಲಿತ ಹೆಣ್ಣು ಮಕ್ಕಳು ಕಾಣಲಿಲ್ಲವೇ…???

●ಕಳೆದ ನಾಲ್ಕು ವರ್ಷದಿಂದ ಅಧಿಕಾರ ನಡೆಸುತ್ತಿದ್ದೀರಿ, ದಲಿತರಿಗಾಗಿ ನೀವು ಮಾಡಿದ ಯಾವುದಾದರೂ ಒಂದು ಯೋಜನೆಯನ್ನು ಹೇಳಿ ನೋಡೋಣ…???

●ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿದೆ, ಉಪಮುಖ್ಯಮಂತ್ರಿ ಹುದ್ದೆಯೂ ಖಾಲಿ ಇದೆ, ಮತ್ತೆ ತಾವ್ಯಾಕೆ ದಲಿತರನ್ನು ಉಪಮುಖ್ಯಮಂತ್ರಿ ಮಾಡುವ ಸಾಹಸಕ್ಕೆ ಕೈ ಹಾಕಲಿಲ್ಲ…???

●ಅಂಬೇಡ್ಕರ್ ರವರು ಸಂವಿಧಾನವನ್ನು ರಚಿಸಿದ ದಿನದಂದು, ಅಂಬೇಡ್ಕರ್ ಚಿತ್ರ ಕಾಣೇಯಾಗಿ, ತಮ್ಮ ಚಿತ್ರ ರಾರಾಜಿಸುತ್ತಿತ್ತಲ್ಲವೇ, ಸಂವಿಧಾನ ರಚಿಸಿದ್ದು ಅಂಬೇಡ್ಕರ್ ರವರೋ ಅಥವಾ ನೀವೋ ಸ್ವಾಮಿ…???

●ಇತ್ತೀಚೆಗೆ ಅಂಬೇಡ್ಕರ್ ರವರ ಮೊಮ್ಮಗ ದೇವೇಗೌಡರ ಮನೆಗೆ ಬಂದದ್ದೇ ಹೊರತು ಸಿದ್ದರಾಮಯ್ಯ ನವರ ಮನೆಗೆ ಅಲ್ಲ ಅನ್ನುವುದನ್ನು ತಿಳಿದುಕೊಳ್ಳಿ…???

ದಲಿತರ ಮತದಿಂದಲೇ ಅಧಿಕಾರ ಹಿಡಿದ ನಿಮ್ಮ ಕೈಯಿಂದ ಅಂತೂ ಅವರಿಗೆ ಉಪಮುಖ್ಯಮಂತ್ರಿ ಪಟ್ಟ ಸಿಗಲಿಲ್ಲ…

ಬೆರಳೇಣಿಕೆಯಷ್ಟು ದಲಿತರ ಮತ ಪಡೆಯುವ ಜನತಾದಳದವರು ಉಪಮುಖ್ಯಮಂತ್ರಿ ಹುದ್ದೆ ಕೊಡುತ್ತೇವೆಂದರೆ ನಿಮಗೆ ಯಾಕೆ ಸ್ವಾಮಿ ಉರಿ…

ದಲಿತರೇನು ಕಾಂಗ್ರೆಸ್ ನವರ ಆಸ್ತಿಯೇ…?

(ವಿಜಯ್ ಅವರ ಗೋಡೆಯಿಂದ)

Advertisements

8 replies »

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s