ಕರ್ನಾಟಕ

ಯಾವ ಹಬ್ಬಕ್ಕೂ ಇಲ್ಲದ ವಿಶೇಷತೆ ಗೌರಿ-ಗಣೇಶ ಹಬ್ಬಕ್ಕಿದೆ. ಅದೇನೆಂದು ಓದಿ ತಿಳಿಯಿರಿ:

ಗೌರಿ ಹಬ್ಬ ಬಂದರೆ ಸಾಕು ಎಲ್ಲರ ಮನೆಯಲ್ಲೂ ಬಾಗೀಣ ಕೊಡುವ ಆಚರಣೆ, ಅಕ್ಕತಂಗಿಯರಿಗೆ ಉಡುಗೊರೆ ನೀಡುವ ಸಂಭ್ರಮ. ಅದೇ ರೀತಿ ಹುಡುಗರು ಗಣೇಶ ಹಬ್ಬವನ್ನು ಬಲು ಜೋರಾಗಿ ಆಚರಿಸುತ್ತಾರೆ.

gowriganesha1.jpg

ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಹಿನ್ನಲೆ, ವಿಶೇಷತೆ, ಸಿದ್ಧತೆಗಳಿರುತ್ತವೆ. ಸ್ವರ್ಣ ಗೌರಿಯ ವ್ರತಕ್ಕೂ ಒಂದು ಹಿನ್ನಲೆಯಿದೆ. ಅದೇನೆಂದರೆ, ಆ ದಿನದಂದು ಈ ಭೂಮಿಯ ಒಡೆಯನಾದ ಶಿವನ ರಾಣಿ ಪಾರ್ವತಿದೇವಿ ನಮ್ಮ ಮನೆಗೆ ಬಂದಿರುತ್ತಾಳೆ. ಒಂದೊಮ್ಮೆ ಶಿವನ ಜೊತೆ ಕುಳಿತಿದ್ದ ಪಾರ್ವತಿ ಕೈಲಾಸದಲ್ಲಿ ಶಿವನನ್ನು ಪ್ರಾರ್ಥಿಸುತ್ತಿದ್ದಳು. “ಸ್ವಾಮಿ! ತವರು ಮನೆಗೆ ಹೋಗಿಬರುವೆ, ಆಜ್ಞೆಕೊಡು” ಎಂದು ಕೇಳಿದಳು. “ನೀ ಹೋದರೆ ನನ್ನನ್ನು ನೋಡಿಕೊಳ್ಳುವವರು ಯಾರು?” ಎಂದು ಗೌರೀವಲ್ಲಭ (ಶಿವ) ಉತ್ತರಿಸುತ್ತಾನೆ. ಪಾರ್ವತಿದೇವಿ ಶಿವನ ಮಾತನ್ನು ಕೇಳಿ, “ಇಡೀ ಜಗತ್ತನ್ನೇ ನೋಡಿಕೊಳ್ಳುವ ನಿಮ್ಮನ್ನು ನಾನು ನೋಡಿಕೊಳ್ಳಬೇಕೆ? ದಯಮಾಡಿ 3ಗಳ ಮಟ್ಟಗೆ ನನ್ನನ್ನು ಕಳುಹಿಸಿಕೊಡಿ” ಎಂದು ಕೇಳಿಕೊಂಡಳು.

hartalika_teej_puja

ಸಹೃದಯೀ ಹರನು ಪಾರ್ವತಿಗೆ, “ಮೂರು ದಿನವೇನು ಐದಾರು ದಿನಗಳವರೆಗೆ ಇರು, ನೀನು ಹೊರಡು. ನಾನು ಗಣೇಶನ ಜೊತೆಗೆ ನಿನ್ನನ್ನು ಕರೆದುಕೊಂಡು ಹೋಗಲು ಬರುತ್ತೇನೆ”. ಹೀಗೆಂದು ಹೇಳಿ ಮಾವನ ಮನೆಗೆ ಬಿಟ್ಟು ಬರುತ್ತಾರೆ. ಸಾಲಿಗ್ರಾಮದ ದೇವಸ್ಥಲವಿರುವ, ಶ್ರೀಮಾನ್ ನರಸಿಂಹನನ್ನು ಅರ್ಥಾತ್ ಶ್ರೀಹರಿಯನ್ನು ಆರಾಧಿಸುವ ಶ್ರೇಷ್ಠ ಶಿವಭಕ್ತರ ಮನೆಯಲ್ಲಿ ನೀನು ಜನಿಸಿದ್ದೀಯ, ಅವರ ಬದುಕಿನಲ್ಲಿದ್ದ ಬಡತನವನ್ನು ಬಿಡಿಸಿ ಐಶ್ವರ್ಯಗಳ ಕೊಟ್ಟು, ಬದುಕಿನ ಕಷ್ಟಗಳನ್ನು ಕಳೆದು, ಸಿರಿ ಸಂಪತ್ತು, ಐಶ್ವರ್ಯಗಳನ್ನು ಅವರಿಗೆ ಕರುಣಿಸಿ, ಪ್ರೀತಿಯ ಮಗಳಾಗಿ ಅವರ ಮನೆಯಲ್ಲಿ ಓಡಾಡಿಕೊಂಡು ನೀನು ನನ್ನಲ್ಲಿಗೆ ಬೇಗ ಬಂದುಬಿಡು ಎಂದು ಭಕ್ತರಿಗೆ ಪಾಲಿಗೆ ವರಪ್ರದಳಾಗಿರುವಂತೆ ಹೇಳಿದರು.

Gowri-Habba-2017-Date

ಅದಕ್ಕಾಗಿ ಸ್ವರ್ಣಗೌರಿಯ ವ್ರತದಂದು ಸಾಂಪ್ರದಾಯ ತಿಳಿದಿರುವ ಮನೆಗಳಲ್ಲಿ ಮೊದಲಿಗೆ ಶ್ರೀಹರಿಗೆ ಪೂಜೆ ಸಲ್ಲಿಸಿ ಆ ನಂತರ ಸ್ವರ್ಣಗೌರಿಯನ್ನು ಪೂಜಿಸುತ್ತಾರೆ. ಶಿವನಿಗೆ ತನ್ನ ಪ್ರೀತಿಯ ಪತ್ನಿಯ ಮೇಲೆ ಅದೆಂಥಾ ಪ್ರೀತಿಯೆಂದರೆ ಮಾರನೆಯ ದಿನದಂದೆ ಅವಳನ್ನು ಕರೆದುಕೊಂಡು ಬರಲು ಕಳುಹಿಸುತ್ತಾನೆ. ಹೀಗಾಗಿ ತೃತೀಯ ತಿಥಿಯಂದು ಗೌರಿ ಹಬ್ಬ. ಮುಂಬರುವ ದಿನವೇ ಚತುರ್ಥಿ ಅಂದೇ ಗಣೇಶ ಹಬ್ಬ. ತಾಯಿಯ ಮನೆಗೆ ಮಗಳು ಬಂದಂತೆ, ಪಾರ್ವತಿದೇವಿ ನಮ್ಮ ಮನೆಗೆ ಬರುತ್ತಾಳೆ. ನಮ್ಮ ಮನೆಯ ಮಗಳು ಹರಸಿದರೆ ಸಾಕು ಸಿರಿ, ಸಂಪತ್ತು, ಐಶ್ವರಯ ವೃದ್ಧಿಯಾಗುತ್ತದೆ. ಅಂತಹುದರಲ್ಲಿ ಪರಮೇಶ್ವರಿಯಾದ ಪಾರ್ವತಿದೇವಿ ನಮ್ಮ ಮನೆಗೆ ಬಂದು ಹರಿಸಿದರೆ ಆ ಮನೆಯ ಅದೃಷ್ಟವೇ ಬೇರೆ. ಪಾರ್ವತೀದೇವಿ ಅನುಗ್ರಹ ಮಾಡಿದಲ್ಲಿ ನಾವು ಸಾತ್ವಿಕವಾದ ಸಂಪತ್ತಿನಿಂದ ಭರಿತರಾಗುತ್ತೇವೆ, ಸಾಧನೆಯ ಮಾರ್ಗದಲ್ಲಿ ನಡೆಯುತ್ತೇವೆ. ಆಡಂಬರವಿಲ್ಲದೇ, ಸ್ವರ್ಣಗೌರಿ ವ್ರತವನ್ನು ಅತ್ಯಂತ ಶ್ರದ್ಧಾ – ಭಕ್ತಿಯಿಂದ ಮಾಡಬೇಕು. ಮದುವೆಯಾಗಿ ಹೋಗಿ ಗಂಡನ ಮನೆಯನ್ನು ಬೆಳಗುತ್ತಿರುವ ಮಗಳು ತವರು ಮನೆಗೆ ಬಂದಾಗ ಎಷ್ಟು ಸಂತೋಷ ಸಡಗರ ಪಡುತ್ತೇವೆಯೋ ಅದರ ಸಾವಿರಪಟ್ಟು ಸಂತೋಷ ಸಡಗರದಿಂದ ನಾವು ಗೌರೀಹಬ್ಬವನ್ನು ಆಚರಿಸಬೇಕು.
ganesha_chaturthi_puja

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s